ಕಲಬುರಗಿ: ಮಳೆ ನಿಂತು ಹೊದ ಮೇಲೆ ಹಾನಿಯತ್ತ ತೊಗರಿ ಬೆಳೆ: ಒಣಬೇರು ಕೊಳೆ ರೋಗದ ನಿಯಂತ್ರಣಕ್ಕೆ ಔಷಧಿ ಸಿಂಪಡಿಸಲು ನಗರದಲ್ಲಿ ಕೃಷಿ ಜೆಡಿ ಸಲಹೆ
ಕಳೆದ ಎರಡು ತಿಂಗಳ ಅವಧಿಯಲ್ಲಿ ಕಲಬುರ್ಗಿ ಜಿಲ್ಲೆಯಲ್ಲಿ ಸುರಿದ ನಿರಂತರ ಮಳೆಯಿಂದ ಹಲವಡೆ ತೊಗರಿ ಬೆಳೆ ನಷ್ಟಗೊಂಡಿದೆ. ಇದೀಗ ಮಳೆ ನಿಂತರು ಕೂಡ ತೊಗರಿ ಬೆಳೆ ಬೇರು ಒಣಗಿ ಕೊಳೆಯುವ ಸ್ಥಿತಿಗೆ ಬಂದು ನಿಂತಿವೆ.. ಈ ಹಿನ್ನೆಲೆಯಲ್ಲಿ ಉಳಿದಿರುವ ಬೆಳೆಗೆ ತಕ್ಷಣ ರೈತರು ರಿಡೋಮಿಲ್ ಕ್ರಿಮಿನಾಶಕ ಔಷಧಿ ಬಳಸುವಂತೆ ಕಲ್ಬುರ್ಗಿಯ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಸಮುದ್ ಪಟೇಲ್ ಅವರು ರೈತರಿಗೆ ಸಲಹೆ ನೀಡಿದ್ದಾರೆ. ಈ ಕುರಿತು ಶನಿವಾರ 8 ಗಂಟೆಗೆ ಮಾಹಿತಿ ಲಭ್ಯವಾಗಿದೆ.