ಭಟ್ಕಳ: ಮೂಡಭಟ್ಕಳ ಬೈಪಾಸ್ ಬಳಿ ಕೆ ಎಸ್ ಆರ್ ಟಿ ಸಿ ಬಸ್ ಡಿಕ್ಕಿಯಾಗಿ ಸ್ಕೂಟಿ ಸವಾರ ಸಾವು
ಭಟ್ಕಳ: ಮೂಡಭಟ್ಕಳ ಬೈಪಾಸ್ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇಮೃತಪಟ್ಟಿದ್ದಾರೆ. ಭಟ್ಕಳ ಪುರವರ್ಗ ಗಣೇಶ ನಗರ ನಿವಾಸಿ, ಸುಂದರ ಲಕ್ಷ್ಮಣ ಆಚಾರಿ(64) ಮೃತಪಟ್ಟ ದುರ್ದೈವಿ. ಕುಂದಾಪುರದಿಂದ ಭಟ್ಕಳ ಕಡೆಗೆ ಅತಿ ವೇಗ ದಿಂದ ಚಲಿಸುತ್ತಿದ್ದ ಕೆಎಸ್ಆರ್ಟಿಸಿ ಬಸ್ ರಸ್ತೆ ಬದಿಯಲ್ಲಿ ಸಾಗುತ್ತಿದ್ದ ಸ್ಕೂಟಿಯನ್ನು ಓವರ್ ಟೇಕ್ ಮಾಡಲು ಯತ್ನಿಸುವ ವೇಳೆ ಡಿಕ್ಕಿ ಹೊಡೆದು ಸವಾರನ ತಲೆ ಮೇಲೆ ಬಸ್ಸಿನ ಹಿಂಬದಿ ಚಕ್ರ ಹತ್ತಿ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ.ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.