ಮೊಳಕಾಲ್ಮೂರು: ತಾಲೂಕಿನ ಯರ್ರೆನಹಳ್ಳಿ ಗ್ರಾಮದಲ್ಲಿ ಶ್ರೀ ಕೋಟೆಗುಡ್ಡ ಮಾರಮ್ಮ ಜಾತ್ರೆಯ ಹಿನ್ನೆಲೆಯಲ್ಲಿ ಮಂಗಳವಾರ ಸಂಜೆ ಗಂಗಾ ಪೂಜೆ ನೆರವೇರಿಸಲಾಯಿತು. ಗಂಗಾ ಪೂಜೆ ಶುದ್ಧತೆ ಮತ್ತು ಜೀವಶಕ್ತಿಯ ಸಂಕೇತವಾಗಿದೆ. ಜಾತ್ರೆಯ ಆರಂಭಕ್ಕೂ ಮೊದಲು ಗಂಗಾ ಪೂಜೆ ನೆರವೇರಿಸುವುದು ಸಂಪ್ರದಾಯ. ಗ್ರಾಮದಲ್ಲಿರುವ ಕೋಟೆಗುಡ್ಡ ಮಾರಮ್ಮ ದೇವಸ್ಥಾನದಲ್ಲಿದ್ದ ದೇವಿಯ ವಿಗ್ರಹವನ್ನು ಅಲಂಕೃತಗೊಂಡ ಪಲ್ಲಕ್ಕಿಯಲ್ಲಿ ಪ್ರತಿಷ್ಠಾಪಿಸಲಾಯಿತು. ಉರುಮೆ ,ಡೊಳ್ಳು,ತಪ್ಪಡೆಗಳ ವಾದ್ಯಗಳೊಂದಿಗೆ ಮೆರವಣಿಗೆಯ ಮೂಲಕ ತುಪ್ಪದಕ್ಕನಹಳ್ಳಿ ಕೆರೆಯ ಹಿಂಭಾಗಕ್ಕೆ ತೆರಳಿ ಪೂಜೆ ಸಲ್ಲಿಸಲಾಯಿತು.