ಸೊರಬ: ಕನ್ನಡ ಭಾಷೆ ದೈನಂದಿನ ಜೀವನದಲ್ಲಿ ಬಳಸಿಕೊಳ್ಳಿ, ಸೊರಬದಲ್ಲಿ ತಹಶೀಲ್ದಾರ್ ಮಂಜುಳಾ ಹೆಗಡಾಳ್
Sorab, Shimoga | Nov 1, 2025 ಭಾಷೆ ಮತ್ತು ನಾಡಿನ ಬಗ್ಗೆ ಕೇವಲ ಒಂದು ದಿನ ಅಭಿಯಾನ ತೋರಿಸಿದರೆ ಸಾಲದು ಅದು ನಮ್ಮ ನಿತ್ಯದ ನಡೆ ಮತ್ತು ನುಡಿ ಆಗಿರಬೇಕು ಕನ್ನಡ ಭಾಷೆಯನ್ನು ದೈನಂದಿನ ಜೀವನದಲ್ಲಿ ಬಳಸಿಕೊಳ್ಳಬೇಕೆಂದು ತಹಶೀಲ್ದಾರ್ ಮಂಜುಳಾ ಹೆಗಡಾಳ್ ಕರೆ ನೀಡಿದರು. ಶನಿವಾರ ಪಟ್ಟಣದ ರಂಗ ಮಂದಿರದಲ್ಲಿ ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಕರ್ನಾಟಕ ಹಲವು ವಿಶೇಷತೆಗಳನ್ನು ಹೊಂದಿದೆ ಇಲ್ಲಿ ಪಂಪ, ರನ್ನ, ಪೊನ್ನರಿಂದ ಹಿಡಿದು ರಾಷ್ಟ್ರಕವಿ ಕುವೆಂಪು, ಡಿ.ಆರ್. ಬೇಂದ್ರೆ, ಶಿವರಾಮ ಕಾರಂತರಂತಹ ಜ್ಞಾನಪೀಠ ಪುರಸ್ಕೃತರ ಸಾಹಿತ್ಯದ ಸಿರಿಯಿದೆ. ವಿಜಯನಗರದ ಭವ್ಯ ಇತಿಹಾಸವಿದೆ, ಹಂಪಿಯ ಕಲಾಕೌಶಲ್ಯವಿದೆ. ಶಿವಶರಣರ ವಚನ ಸಾಹಿತ್ಯದ ಸಮಾನತೆಯ ಸಂದೇಶವಿದೆ ಎಂದರು.