ಸಿರವಾರ: ಅತ್ತನೂರು ಗ್ರಾಮ ಪಂಚಾಯಿತಿಯಲ್ಲಿ ಮತದಾನ ಜಾಗೃತಿ ಕಾರ್ಯಕ್ರಮ
Sirwar, Raichur | Mar 27, 2024 ಮೇ.7ರಂದು ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಪ್ರತಿಯೊಬ್ಬರು ತಪ್ಪದೇ ಕಡ್ಡಾಯವಾಗಿ ಮತದಾನ ಮಾಡುವ ಮೂಲಕ ಮತದಾನ ಪ್ರತಿಶತ ಹೆಚ್ಚಿಸಬೇಕೆಂದು ಸಿರವಾರ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ್ ಕರೆ ನೀಡಿದರು. ತಾಲ್ಲೂಕಿನ ಅತ್ತನೂರು ಗ್ರಾಮ ಪಂಚಾಯತ್ ಆವರಣದಲ್ಲಿ ಬುಧವಾರ ಜಿ.ಪಂ ರಾಯಚೂರು, ತಾಲ್ಲೂಕಾಡಳಿತ ಹಾಗೂ ತಾ.ಪಂ ಸಿರವಾರ ಮತ್ತು ತಾಲ್ಲೂಕು ಸ್ವಿಪ್ ಸಮಿತಿಯಿಂದ ಸಂಜೀವಿನ ಯೋಜನೆಯಡಿ ಮತದಾನ ಜಾಗೃತಿ ಕಾರ್ಯಕ್ರಮದ ಪ್ರತಿಜ್ಞಾವಿಧಿ ಬೋಧಿಸಿದರು.