ಸಿಂದಗಿ ಪಟ್ಟಣದ ತಹಶೀಲ್ದಾರ್ ಕಚೇರಿ ಎದುರು ಬ್ಯಾಕೋಡ ಗ್ರಾಮದ ರೈತರಿಂದ ಪ್ರತಿಭಟನೆ ಜರುಗಿತು. ಬ್ಯಾಕೋಡ ಗ್ರಾಮದಿಂದ ಮಾಡಬಾಳ ಗ್ರಾಮಕ್ಕೆ ಹೋಗುವ ಸಾರ್ವಜನಿಕ ರಸ್ತೆಯನ್ನು ಅತಿಕ್ರಮಣ ಮಾಡಿರುವುದನ್ನು ತೆರವುಗೊಳಿಸಬೇಕು ಎಂದು ತಹಶೀಲ್ದಾರ್‌ಗೆ ಬ್ಯಾಕೋಡ ಗ್ರಾಮದ ರೈತರು ಒತ್ತಾಯಿಸಿದರು. ಈ ವೇಳೆ ಬ್ಯಾಕೋಡ ಗ್ರಾಮದ ರೈತರಾದ ನಿಂಗಪ್ಪ ಭಾವಿಕಟ್ಟಿ, ರಾಯಪ್ಪ ಹಳಗೊಂಡ, ಪರಶುರಾಮ ಹೊಸಮನಿ ಸೇರಿದಂತೆ ನೂರಾರು ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.