ಹೆಗ್ಗಡದೇವನಕೋಟೆ: ಎಚ್.ಡಿ. ಕೋಟೆ ತಾಲ್ಲೂಕಿನ ಸಿದ್ದಾಪುರದಲ್ಲಿ ಆನೆ ದಾಳಿಗೆ ವ್ಯಕ್ತಿಗೆ ಗಾಯ
ಎಚ್.ಡಿ. ಕೋಟೆ ತಾಲ್ಲೂಕಿನ ಸಿದ್ದಾಪುರ ಗ್ರಾಮದಲ್ಲಿ ಆನೆ ದಾಳಿಯಿಂದ ರೈತರೊಬ್ಬರಿಗೆ ತೀವ್ರವಾಗಿ ಗಾಯಗೊಂಡಿದ್ದಾರೆ. ಗ್ರಾಮದ ರೈತ ನಲ್ವತ್ತೆಂಟು ವರ್ಷದ ನಿಂಗನಾಯಕ ತೀವ್ರವಾಗಿ ಗಾಯಗೊಂಡ ರೈತ. ಶನಿವಾರ ಬೆಳಿಗ್ಗಿನ ಜಾವ ನಾಲ್ಕರ ಸಮಯದಲ್ಲಿ ಜಮೀನಿನಲ್ಲಿಕಾವಲು ಕಾಯುತ್ತಿದ್ದ ವೇಳೆ ಕಾಡಾನೆ ದಾಳಿ ನಡೆಸಿದ್ದು ರೈತ ನಿಂಗನಾಯಕರವರ ಕಾಲು ಮುರಿದಿದೆ. ತೀವ್ರವಾಗಿ ಗಾಯಗೊಂಡ ಗಾಯಾಳುವನ್ನು ಎಚ್.ಡಿ. ಕೋಟೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಇತ್ತ ಗ್ರಾಮದಲ್ಲಿ ಆನೆಗಳನ್ನು ಗ್ರಾಮಕ್ಕೆ ಬರದಂತೆ ತಡೆಯಬೇಕು ಎಂದು ಗ್ರಾಮಸ್ಥರು ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ