ಶಿರಸಿ: ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ಮಾಸಿಕ ಪ್ರಗತಿ ಪರಿಶೀಲನಾ ಸಭೆ : ವಿವಿಧ ಇಲಾಖೆಗಳ ಪ್ರಗತಿ ಚರ್ಚೆ
ಶಿರಸಿ: ಮಳೆಯಿಂದ ವಾಂತಿ-ಬೇಧಿ ಸಹಿತ ಜ್ವರ ಪ್ರಕರಣಗಳು ಹೆಚ್ಚುತ್ತಿದ್ದು, ರೋಗಿಗಳಿಗೆ ಇಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಕಡ್ಡಾಯವಾಗಿ ಬಿಸಿ ನೀರು ಹಾಗೂ ಮಾಸ್ಕ್ ಬಳಕೆ ಮಾಡಬೇಕು ಎಂದು ತಾಲೂಕಾ ವೈದ್ಯಾಧಿಕಾರಿ ಡಾ.ವಿನಾಯಕ ಭಟ್ಟ ಹೇಳಿದರು. ಅವರು ನಗರದ ತಾಪಂ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ಆಡಳಿತಾಧಿಕಾರಿ ಡಾ.ಬಿ.ಪಿ.ಸತೀಶ ಅಧ್ಯಕ್ಷತೆಯಲ್ಲಿ ನಡೆದ ತಾಲೂಕಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಆರೋಗ್ಯ ಇಲಾಖೆಯ ಪ್ರಗತಿಯ ಕುರಿತು ವಿಷಯ ಪ್ರಸ್ತಾಪಿಸಿ, ಅನುದಾನದ ಕೊರತೆಯಿಂದ ನಾಯಿ ಕಡಿತದ ಲಸಿಕೆ ಕೊರತೆಯಿತ್ತು. ಅನುದಾನ ಹೊಂದಾಣಿಕೆ ಮಾಡಿ ನಾಯಿ ಕಡಿತ ಹಾಗೂ ಹಾವು ಕಡಿತ ಚುಚ್ಚುಮದ್ದು ದಾಸ್ತಾನಿಡಲಾಗಿದೆ ಎಂದರು.