ಬೇಲೂರು: ದೊಡ್ಡಮೆದೂರು ಗ್ರಾಮದ ಮನೆಯಲ್ಲಿ ಕಳ್ಳತನ: 4.5 ಲಕ್ಷ ನಗದು, ಇನ್ನೋವಾ ಕಾರು, ಮೊಬೈಲ್ ಸೇರಿದಂತೆ ಬೆಲೆಬಾಳುವ ವಸ್ತು ಕಳ್ಳತನ
Belur, Hassan | Sep 26, 2025 ಬೇಲೂರು: ಜಯ ಕರ್ನಾಟಕ ಸಂಘಟನೆಯ ಜಿಲ್ಲಾಧ್ಯಕ್ಷರೋಬ್ಬರ ಮನೆಯಲ್ಲಿ ಕಳ್ಳತನ ನಡೆದಿದ್ದು 4.50 ಲಕ್ಷ ರೂ ನಗದು, ಇನ್ನೋವಾ ಕಾರು ಮತ್ತು ಬೆಲೆಬಾಳುವ ವಸ್ತುಗಳನ್ನು ಕಳ್ಳರು ಕದ್ದೋಯ್ದಿರುವ ಘಟನೆ ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ದೊಡ್ಡ ಮೇದೂರು ಗ್ರಾಮದಲ್ಲಿ ನಡೆದಿದೆ. ಮನೆಯ ಹಿಂಬಾಗಿಲಿನ ಬೀಗ ಮುರಿದು ಒಳ ನುಗ್ಗಿರುವ ಕಳ್ಳರು ಮನೆಯ ಹಾಲ್ ನಲ್ಲಿ ಇಟ್ಟಿದ್ದ 70 ಸಾವಿರ ಹಣ ಸ್ಯಾಮ್ಸಂಗ್ ಕಂಪನಿಯ 2 ಮೊಬೈಲ್ ಗಳು ಅದೇ ಕಂಪನಿಯ ವಾಚ್ ಎಗರಿಸಿ ಎಸ್ಕೇಪ್ ಆಗಿದ್ದಾರೆ. ಅಲ್ಲದೆ ಮನೆಯ ಮುಂಭಾಗ ನಿಲ್ಲಿಸಿದ್ದ ಕೆಎ 46 ಎಂ 65 03 ನಂಬರಿನ ಇನ್ನೋವಾ ಕಾರು ಮತ್ತು ಅದರೊಳಗಿಟ್ಟಿದ್ದ 4.5 ಲಕ್ಷ ರೂಪಾಯಿ ನಗದು ಮತ್ತು ಎಟಿಎಂ ಕಾರ್ಡ್ ಗಳನ್ನು ಕದ್ದು ಪರಾರಿಯಾಗಿದ್ದಾರೆ.