ಅಫಜಲ್ಪುರ: ಪಟ್ಟಣದಲ್ಲಿ ಆತ್ಮಹತ್ಯೆ, ರೈತನ ಮನೆಗೆ ಜೆಡಿಎಸ್ ನಾಯಕರ ಭೇಟಿ ಸಾಂತ್ವನ: ಪ್ರವಾಹ ಹಾನಿ ಪರಿಹಾರಕ್ಕೆ ಸರ್ಕಾರದ ಗಮನ ಸೆಳೆದು ಒತ್ತಾಯ
ಅಫಜಲಪುರ ಮತಕ್ಷೇತ್ರದ ಬಸವಪಟ್ಟಣದ ರೈತ ಮರೇಪ್ಪ ಬರ್ಮಾ ಆತ್ಮಹತ್ಯೆ ಮಾಡಿದ ಹಿನ್ನೆಲೆಯಲ್ಲಿ ಜೆಡಿಎಸ್ ರಾಜ್ಯಮಟ್ಟದ ತಂಡವು ಅವರ ಮನೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿ ₹35 ಸಾವಿರ ಸಹಾಯಧನ ನೀಡಿತು. ಭಾರಿ ಮಳೆ ಹಾಗೂ ಪ್ರವಾಹದಿಂದ ಉಂಟಾದ ವ್ಯಾಪಕ ಹಾನಿ ಪರಿಶೀಲಿಸಿದ jds ನಾಯಕ ಸುರೇಶ್ ಬಾಬುರವರು, ಕರೆಮ್ಮ ನಾಯಕ್ ಹಾಗೂ ವೆಂಕಟರಾವ್ ನಾಡಗೌಡರು, ಸರ್ಕಾರ ತಕ್ಷಣ ಪರಿಹಾರ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಹತ್ತಿ ಬೆಳೆ ನಾಶ ಮತ್ತು ಮುಳುಗಡೆಯಾದ ಹೊನ್ನಾಳ ಗ್ರಾಮಕ್ಕೆ ತುರ್ತು ಪರಿಹಾರ ನೀಡುವಂತೆ ತಂಡ ಆಗ್ರಹಿಸಿದೆ. ಈ ಕುರಿತು ಬುಧವಾರ 8 ಗಂಟೆಗೆ ಮಾಹಿತಿ ಲಭ್ಯವಾಗಿದೆ..