ಹಾವೇರಿ: ಬೆಳಗಾವಿ ಘಟನೆಗೆ ಪೊಲೀಸ್ ವೈಪಲ್ಯ ಕಾರಣ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಹಾವೇರಿಯಲ್ಲಿ ಆರೋಪ
Haveri, Haveri | Oct 4, 2025 ಬೆಳಗಾವಿ ಘಟನೆಗೆ ಪೊಲೀಸ್ ವೈಫಲ್ಯ ಕಾರಣ ಎಂದು ಹಾವೇರಿ ಸಂಸದ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಆರೋಪಿಸಿದ್ದಾರೆ. ಹಾವೇರಿ ಸಮೀಪದ ಜಂಗಮನಕೊಪ್ಪ ಕ್ರಾಸ್ ಬಳಿ ಮಾತನಾಡಿದ ಅವರು ರಾಜ್ಯದಲ್ಲಿ ಕಾನೂನು ಸವ್ಯವಸ್ಥೆ ಕುಸಿದಿದೆ ಎಂದು ಆರೋಪಿಸಿದರು. ರಾಜ್ಯದಲ್ಲಿ ಆರೋಪಿಗಳಿಗೆ ಕಾನೂನು ಭಯ ಪೊಲೀಸ ಭಯ ಇಲ್ಲದಂತಾಗಿದೆ ಎಂದು ಬೊಮ್ಮಾಯಿ ಆರೋಪಿಸಿದರು. ಗೃಹ ಸಚಿವರು ಘಟನೆಯನ್ನ ಗಂಭೀರವಾಗಿ ತಗೆದುಕೊಳ್ಳಬೇಕು ಎಂದು ಬೊಮ್ಮಾಯಿ ಆಗ್ರಹಿಸಿದರು