ರಿಪ್ಪನ್ ಪೇಟೆಯ ಕೋಡೂರು ಸಮೀಪದ ಕೀಳಂಬಿ ಗ್ರಾಮದಲ್ಲಿ ಜಾನುವಾರು ಒಂದರ ಮೇಲೆ ಕಾಡು ಪ್ರಾಣಿ ಎಂದು ದಾಳಿ ನಡೆಸಿ ಕೊಂದಿರುವ ಘಟನೆ ವರದಿಯಾಗಿದ್ದು ಇದು ಹುಲಿ ದಾಳಿ ಎಂದು ಗ್ರಾಮಸ್ಥರು ಶಂಕೆ ವ್ಯಕ್ತಪಡಿಸಿದ್ದಾರೆ. ಘಟನೆ ನಡೆದ ನಂತರ ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಕೀಳಂಬಿ ಗ್ರಾಮದ ಸರ್ಕಾರಿ ಶಾಲೆಯ ಸಮೀಪದಲ್ಲಿ ಇರುವ ಕೆರೆ ಬಳಿ ರಘುರಾಮ್ ಎಂಬುವರಿಗೆ ಸೇರಿದ ಜಾನುವಾರು ಮೇಲೆ ಕಾಡುಪ್ರಾಣಿ ದಾಳಿ ನಡೆಸಿದ್ದು, ಜಾನುವಾರಿನಾ ಶವ ಪತ್ತೆಯಾಗಿದ್ದು ಕುತ್ತಿಗೆ ಮತ್ತು ದೇಹದ ಭಾಗದಲ್ಲಿ ಗಾಯಗಳು ಕಂಡುಬಂದಿದೆ. ಇದು ಹುಲಿ ದಾಳಿಗೆ ಇರಬಹುದು ಎಂದು ಗ್ರಾಮಸ್ಥರು ಅನುಮಾನ ವ್ಯಕ್ತಪಡಿಸಿದ್ದು ಈ ಕುರಿತಾದ ಮಾಹಿತಿ ಗುರುವಾರ ಲಭ್ಯವಾಗಿದೆ.