ಯಲಹಂಕ ಸರ್ಕಾರಿ ಆಸ್ಪತ್ರೆಯಲ್ಲಿ ನೂತನವಾಗಿ ಶಿಶು ಆಹಾರ ಕೊಠಡಿಯನ್ನು ಇಂದು ಲೋಕಾರ್ಪಣೆ ಮಾಡಲಾಯಿತು. ಯಲಹಂಕ ಶಾಸಕ ವಿಶ್ವನಾಥ್ ಹಾಗೂ ವೈದ್ಯರ ಸಮ್ಮುಖದಲ್ಲಿ ಶಿಶು ಆಹಾರ ಕೊಠಡಿ ಉದ್ಘಾಟನೆ ಮಾಡಲಾಯಿತು. ಸರ್ಕಾರಿ ಆಸ್ಪತ್ರೆಗೆ ಬರುವ ತಾಯಂದಿರ ಅನುಕೂಲಕ್ಕಾಗಿ ಶಿಶು ಆಹಾರ ಕೊಠಡಿಯನ್ನ ನಿರ್ಮಾಣ ಮಾಡಲಾಗಿದ್ದು ತಾಯಂದಿರು ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದು ಶಾಸಕರು ಇದೇ ವೇಳೆ ತಾಯಂದಿರಿಗೆ ಮನವಿ ಮಾಡಿದರು.