ಹೆಗ್ಗಡದೇವನಕೋಟೆ: ಬೆಳಗನಹಳ್ಳಿ ಮತ್ತು ಹೊಸತೊರವಳ್ಳಿ ಸಮೀಪದ ಬೀರೇಶ್ವರ ದೇವಾಲಯದಲ್ಲಿ ನಡೆದ ಹೆಬ್ಬಳ್ಳದಯ್ಯನ ಜಾತ್ರಾ ಮಹೋತ್ಸವ
ಬೆಳಗನಹಳ್ಳಿ ಮತ್ತು ಹೊಸತೊರವಳ್ಳಿ ಗ್ರಾಮಗಳ ಸಮೀಪದ ಬೀರೇಶ್ವರ ದೇವಾಲಯದಲ್ಲಿ ಹೆಬ್ಬಳ್ಳದಯ್ಯನ ಜಾತ್ರೆ ಬುಧವಾರ ಅದ್ಧೂರಿಯಾಗಿ ಜರುಗಿತು. ಪಟ್ಟಣದ ಕುರುಬ ಸಮಾಜದವರು ಈ ಜಾತ್ರೆಯನ್ನು ನಡೆಸಿಕೊಟ್ಟರು. ಚಿಣ್ಣರು ಮಕ್ಕಳು ಕೊಂಬು ಕಹಳೆಯ ನಾದಕ್ಕೆ ಹೆಜ್ಜೆ ಹಾಕಿದರು. ಬೆಳಗನಹಳ್ಳಿ, ಹೊಸತೊರವಳ್ಳಿ, ವಡ್ಡರಗುಡಿ, ಎಚ್.ಡಿ. ಕೋಟೆ, ಚಾಕಳ್ಳಿ, ಹೆಬ್ಬಳ್ಳ, ಚಕ್ಕೋಡನಹಳ್ಳಿ, ಕೃಷ್ಣಾಪುರ, ಸವ್ವೆ ಸೇರಿದಂತೆ ಹಲವಾರು ಗ್ರಾಮಗಳಿಂದ ಭಕ್ತರು ಜಾತ್ರೆಗೆ ಆಗಮಿಸಿ ಭಕ್ತಿ ಭಾವ ಮೆರೆದರು.