ಚಿತ್ರದುರ್ಗ ನಗರದಲ್ಲಿ ನಿನ್ನೆಯಷ್ಠೆ ಅಕ್ಕ ಪಡೆಗೆ ಚಾಲನೆ ಸಿಕ್ಕಿದೆ. ಈ ನಿಟ್ಟಿನಲ್ಲಿ ಇಂದು ನಗರದ ಹಲವು ಕಡೆ ಅಕ್ಕ ಪಡೆ ಸಿಬ್ಬಂದಿ ರೌಂಡ್ಸ್ ಮಾಡಿದ್ದು, ಶಾಲಾ, ಕಾಲೇಜು ಹಾಗೂ ಹಾಸ್ಟೇಲ್ ಗೂ ಭೇಟಿ ನೀಡಿ, ಸಮಸ್ಯೆಗಳ ಕುರಿತು ಆಲಿಸಿದ್ದಾರೆ. ನಗರದ ವಿಧ್ಯಾ ನಗರದ ಬಿಸಿಎಂ ಹಾಸ್ಟೇಲ್, ಭೀಮಸಮುದ್ರ ರಸ್ತೆಯ ಅರವಿಂದ್ ಗಾರ್ಮೇಂಟ್ಸ್, ಸೇರಿದಂತೆ ಹಲವು ಶಾಲೆಗಳಿಗೂ ಭೇಟಿ ನೀಡಿದ್ದಾರೆ. ಈ ವೇಳೆ ಮಹಿಳೆಯರಿಗೆ ಹಾಗೂ ಮಕ್ಕಳಿಗೆ ರಕ್ಷಣೆ ನೀಡುವ ನಿಟ್ಟಿನಲ್ಲಿ ಹಾಗೂ ದೌರ್ಜನ್ಯ ತಡೆಯ ಕುರಿತು ಮಾಹಿತಿ ನೀಡಿದ್ದಾರೆ. ಅಲ್ಲದೇ ಶಾಲಾ ಕಾಲೇಜು ಹಾಗೂ ಹಾಸ್ಟೇಲ್ ವಿಧ್ಯಾರ್ಥಿನಿಯರ ಕುಂದು ಕೊರತೆಗಳನ್ನೂ ಕೂಡಾ ಆಲಿಸಿದ್ದಾರೆ. ಅಲ್ಲದೇ ಅಕ್ಕ ಪಡೆ ಜಿಲ್ಲೆಯಾಧ್ಯಂತ ಮಹಿಳೆಯರು & ಮಕ್ಕಳ ಪರ ಕೆಲಸ ಮಾಡುತ್ತದೆ ಎಂದು ತಿಳಿಸಿದ್ದಾರೆ.