ಸಿಂದಗಿ: ಗಬಸಾವಳಗಿ, ಬಿಸನಾಳ ಗ್ರಾಮಗಳನ್ನು ಸಿಂದಗಿ ತಾಲ್ಲೂಕಿಗೆ ಸೇರಿಸದಿದ್ದರೆ ಸಾರ್ವತ್ರಿಕ ಚುನಾವಣೆ ಬಹಿಷ್ಕಾರ: ಪಟ್ಟಣದಲ್ಲಿ ಶಾಂತಗೌಡ ಬಿರಾದಾರ
ಪಟ್ಟಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಗಬಸಾವಳಗಿ, ಬಿಸನಾಳ ಗ್ರಾಮಗಳನ್ನು ಸಿಂದಗಿ ತಾಲೂಕಿನಲ್ಲಿಯೇ ಉಳಿಸಿ ಹೋರಾಟ ವೇದಿಕೆಯ ಪ್ರಮುಖ ಶಾಂತಗೌಡ ಬಿರಾದಾರ, ಗಬಸಾವಳಗಿ, ಬಿಸನಾಳ ಗ್ರಾಮಗಳನ್ನು ಸಿಂದಗಿ ತಾಲ್ಲೂಕಿಗೆ ಸೇರಿಸದಿದ್ದಲ್ಲಿ ಸಾರ್ವತ್ರಿಕ ಚುನಾವಣೆ ಬಹಿಷ್ಕಾರ ಮಾಡಲಾಗುವುದು ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು. ಗಬಸಾವಳಗಿ, ಬಿಸನಾಳ ಗ್ರಾಮಗಳನ್ನು ಸಿಂದಗಿ ತಾಲೂಕಿನಲ್ಲಿಯೇ ಉಳಿಸಿ ಹೋರಾಟ ವೇದಿಕೆಯ ಗೌರವಾಧ್ಯಕ್ಷ ಬಾಬುಗೌಡ ಕಾ. ಬಿರಾದಾರ, ಅಧ್ಯಕ್ಷ ಪ್ರಭುಗೌಡ ಬಿರಾದಾರ, ಪ್ರಧಾನ ಕಾರ್ಯದರ್ಶಿ ಬಾಬುಗೌಡ ಅ. ಬಿರಾದಾರ, ಸಂಘಟನಾ ಕಾರ್ಯದರ್ಶಿ ಗೌಡಪ್ಪಗೌಡ ಬಿರಾದಾರ, ಸಂಚಾಲಕ ಶಿವಶರಣ ಹೆಳವರ, ಮಲ್ಲಯ್ಯ ಹಿರೇಮಠ, ಬಸನಗೌಡ ಬಿರಾದಾರ ಹಾಜರಿದ್ದರು.