ಬೆಂಗಳೂರು ಉತ್ತರ: ನಮ್ಮ ಸಮುದಾಯದ ಖಾಲಿಯಾದ ಜಾಗ ನಮ್ಮ ಸಮುದಾಯಕ್ಕೆ ಕೊಡಬೇಕು: ನಗರದಲ್ಲಿ ಸತೀಶ್ ಜಾರಕಿಹೊಳಿ
ಕೆ.ಎನ್ ರಾಜಣ್ಣ ವಿಚಾರಕ್ಕೆ ಸಂಬಂಧಿಸಿ ಶನಿವಾರ ಸಂಜೆ 5 ಗಂಟೆ ಸುಮಾರಿಗೆ ವಿಧಾನಸೌಧದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸತೀಶ್ ಜಾರಕಿಹೊಳಿ ಅವರು, ಅಧಿವೇಶನ ಬಳಿಕ ರಾಜಣ್ಣ ದೆಹಲಿಗೆ ಹೋಗ್ತಾರೆ, ರಾಜಣ್ಣ ತಮ್ಮ ಸಮಸ್ಯೆ ಹೇಳಿಕೊಳ್ತಾರೆ. ನಾವ್ಯಾರು ಹೋಗುವುದು ಸರಿಯಲ್ಲ ಹೈಕಮಾಂಡ್ ಜತೆ ನಾವು ಮಾತನಾಡ್ತೀವಿ . ನಮ್ಮ ಸಮುದಾಯದಿಂದ ಖಾಲಿಯಾದ ಎರಡು ಸ್ಥಾನ ನಮ್ಮ ಸಮುದಾಯಕ್ಕೆ ಕೊಡಬೇಕು. ಆ ಬೇಡಿಕೆ ಇದ್ದೇ ಇದೆ..ಅದನ್ನ ಮಾಡ್ತಿವಿ. ರಾಜಣ್ಣ ಪ್ರಕರಣದ ಹಿಂದೆ ಯಾರಿದ್ದಾರೆ ಅನ್ನೋದು ಅವರೇ ಹೇಳಬೇಕು ಎಂದರು.