ಹಿರಿಯೂರು: ನಗರದ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಆವರಣದಲ್ಲಿ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ
ತಾಲ್ಲೂಕು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಸದರಿ ಸಾಲಿನಲ್ಲಿ ರೈತ ಸದಸ್ಯರಿಗೆ 75ಲಕ್ಷ ರೂಗಳು ಆರ್ಥಿಕ ಹಂಚಿಕೆಯಾಗಿದ್ದು, ಪ್ರಸಕ್ತ ಸಾಲಿನ ವಸೂಲಾತಿ ಶೇ.94% ರಷ್ಟು ಪ್ರಗತಿಯಾಗಿರುತ್ತದೆ ಎಂಬುದಾಗಿ ಬ್ಯಾಂಕಿನ ಅಧ್ಯಕ್ಷರಾದ ಡಿ.ತಿಪ್ಪೇಸ್ವಾಮಿ ಎಂ.ಡಿ.ಕೋಟೆ ಅವರು ಹೇಳಿದರು. ನಗರದ ತಾಲ್ಲೂಕು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನ ಆವರಣದಲ್ಲಿ ಸೋಮವಾರ ಹಮ್ಮಿಕೊಳ್ಳಲಾಗಿದ್ದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು. ಈ ಸಭೆಯಲ್ಲಿ ಬ್ಯಾಂಕಿನ ಉಪಾಧ್ಯಕ್ಷರಾದ ಕಮಲಮ್ಮ,ನಿರ್ದೇಶಕರುಗಳಾದ ಪಿ.ಎಸ್.ಸಾದತ್ ಉಲ್ಲಾ,ಕೆ.ಗಿರಿಜಣ್ಣ, ಕೆ.ಕೃಷ್ಣಯ್ಯ, ಎಸ್. ಜೆ. ಹನುಮಂತರಾಯ ಇದ್ದರು.