ಚಳ್ಳಕೆರೆ:-ತಾಲೂಕಿನ ಕೊರ್ಲಕುಂಟೆ ಗ್ರಾಮದಲ್ಲಿ ಜ.12 ರಿಂದ ಮೂರು ದಿನಗಳ ಕಾಲ ದೊಡ್ಡ ಮಾರಮ್ಮನ (ದೊಡ್ಡ ಜಾತ್ರೆ) ಹಬ್ಬ ನಡೆಯಲಿದೆ. ಸುಮಾರು ಹತ್ತು ವರ್ಷಗಳ ಬಳಿಕ ನಡೆಯುವ ಹಿರಿಯರ ಸಂಪ್ರದಾಯದ ಹಬ್ಬವಾಗಿದೆ. ಗ್ರಾಮದ ಹಿತಕ್ಕಾಗಿ ಮತ್ತು ಜನ,ಜಾನುವಾರುಗಳಿಗೆ ಯಾವುದೇ ಸಾಂಕ್ರಾಮಿಕ ರೋಗಬಾಧೆಗಳು ಹರಡಂತೆ ಗ್ರಾಮ ದೇವತೆ ಮಾರಮ್ನನ್ನು ತಣ್ಣಗೆ ಮಾಡಲು ದೊಡ್ಡ ಜಾತ್ರೆ ಮಾರ್ಗವನ್ನು ಹಿರಿಯರು ಅನುಸರಿಸಿದ್ದಾರೆ ಎನ್ನಲಾಗಿದೆ. ಇದರಿಂದ ಆಗ ಆಸ್ಪತ್ರೆ, ಇಂಜೆಕ್ಷನ್, ಮಾತ್ರೆ ಇಲ್ಲದ ಕಾಲದಲ್ಕೂ ಮಕ್ಕಳ ಸಣ್ಣಪುಟ್ಟ ಕಾಯಿಲೆಗೆ ಅಮ್ಮ( ದೇವಿ)ನ ಪತ್ರೆಯನ್ನು ಹರೆದು ಕುಡಿಸಿ ಹತ್ತಾರು ಮಕ್ಕಳನ್ನು ಸಾಕಿಕೊಂಡ ಹಿರಿಯರು ಗ್ರಾಮ ದೇವತೆಯನ್ನು ನಂಬಿಕೊಂಡದ್ದ ಪದ್ದತಿ ಹಬ್ಬವಾಗಿದೆ ಎನ್ನುತ್ತಾರೆ ಹಿರಿಯರು.