ಹುಮ್ನಾಬಾದ್: ದತ್ತ ಜಯಂತಿ ಅಂಗವಾಗಿ ಮಾಣಿಕನಗರದ ಮಾಣಿಕಪ್ರಭು ದೇವಸ್ಥಾನದಲ್ಲಿ ಭಕ್ತರಿಗೆ ಸ್ವತಃ ಪ್ರಸಾದ ವಿತರಿಸಿದ ಸಂಸ್ಥಾನದ ಪೀಠಾಧಿಪತಿ ಡಾ. ಜ್ಞಾನರಾಜಶ್ರೀ
ಕಲ್ಯಾಣ ಕರ್ನಾಟಕದ ಇತಿಹಾಸ ಪ್ರಸಿದ್ಧ ಧರ್ಮ ಸಮನ್ವಯತೆ ಖ್ಯಾತಿ ಹೊಂದಿರುವ ಮಾಣಿಕಪ್ರಭು ಸಂಸ್ಥಾನದ ಪೀಠಾಧಿಪತಿ ಪೂಜ್ಯ ಡಾ. ಜ್ಞಾನರಾಜ ಮಹಾರಾಜರು ಭಕ್ತಾದಿಗಳಿಗೆ ಸ್ವತಃ ಪ್ರಸಾದ ಬಡಿಸಿದರು. ಪ್ರಸಾದ ವಿತರಣೆಗೂ ಮುನ್ನ ವಾದ್ಯ ವೃಂದ ಹಾಗೂ ಮಂತ್ರಘೋಷಗಳೊಂದಿಗೆ ಶ್ರೀಗಳನ್ನು ಬಂಡಾರ್ಖಾನೆ ವರೆಗೆ ಕರೆತರಲಾಯಿತು. ಬಳಿಕ ಶ್ರೀಗಳು ಪ್ರಸಾದಕ್ಕೆ ಪೂಜೆಯನ್ನು ಸಲ್ಲಿಸಿ ನೆರೆದ ಸಾವಿರಾರು ಸಂಖ್ಯೆ ಭಕ್ತಾದಿಗಳಿಗೆ ಹೋಳಿಗೆ ತಪ್ಪದ ಪ್ರಸಾದ ಬಡಿಸಿದರು.