ಜೇವರ್ಗಿ: ಬಳ್ಳುಂಡಗಿಗೆ ಶಾಸಕ ಅಯಸಿಂಗ್ ಭೇಟಿ ಪ್ರವಾಹ ಪರಿಶೀಲನೆ: ಯಡ್ರಾಮಿಯಲ್ಲಿ ಮೃತ ಸಾನಿಯಾ ಕುಟುಂಬಕ್ಕೆ ಸಾಂತ್ವಾನ
ಜೇವರ್ಗಿ ತಾಲೂಕಿನ ಬಳ್ಳುಂಡಗಿ ಗ್ರಾಮ ಹಾಗೂ ಸುತ್ತಮುತ್ತಲಿನ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ಶಾಸಕ ಅಯಸಿಂಗ್ ರೈತರ ನೋವು ಆಲಿಸಿ, ಬೆಳೆ ನಷ್ಟಕ್ಕೆ ಶೀಘ್ರ ಪರಿಹಾರ ಒದಗಿಸುವ ಭರವಸೆ ನೀಡಿದರು. ನಿರಾಶ್ರಿತರಿಗೆ ಸೂಕ್ತ ಸೌಲಭ್ಯ ಕಲ್ಪಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು ಎಂದು ಬುದವಾರ 8 ಗಂಟೆಗೆ ಮಾಹಿತಿ ಲಭ್ಯವಾಗಿದೆ. ಇನ್ನು ಇತ್ತೀಚಿಗೆ ಯಡ್ರಾಮಿ ಪಟ್ಟಣದಲ್ಲಿ ಮನೆಯ ಗೋಡೆ ಕುಸಿದು ಸಾವನ್ನಪ್ಪಿದ 17 ವರ್ಷದ ಬಾಲಕಿ ಸಾನಿಯಾ ಕುಟುಂಬಕ್ಕೆ ಭೇಟಿ ನೀಡಿ ಸಾಂತ್ವನ ಹೇಳಿ, ವೈಯಕ್ತಿಕ ನೆರವು ನೀಡಿದರು. ಸರ್ಕಾರದ ಪರಿಹಾರ ಕ್ರಮಗಳನ್ನು ತಕ್ಷಣ ಜಾರಿಗೆ ತರಲು ತಹಶೀಲ್ದಾರರಿಗೆ ಸೂಚಿಸಲಾಯಿತು. ಈ ಸಂದರ್ಭ ಕಾಂಗ್ರೆಸ್ ಮುಖಂಡರು, ತಾಲೂಕು ಅಧಿಕಾರಿಗಳು ಮತ್ತು ಗ್ರಾಮಸ್ಥರು ಹಾಜರಿದ್ದರು...