ಧಾರವಾಡ ಸಾರ್ವಜನಿಕ ಪ್ರಯಾಣಿಕರ ಗಮನಕ್ಕೆ ಧಾರವಾಡ ನಗರ ಸಾರಿಗೆ ಬಸ್ ನಿಲ್ದಾಣವನ್ನು ನೂತನವಾಗಿ ನಿರ್ಮಿಸಲಾಗಿದ್ದು, ಮೊದಲ ಹಂತವಾಗಿ ಪ್ರಸ್ತುತ ಕಿಟಲ್ ಕಾಲೇಜ್ ನಿಲ್ದಾಣದಿಂದ ಕಾರ್ಯಚರಣೆಯಾಗುತ್ತಿರುವ ಗ್ರಾಮನಗಟ್ಟಿ, ತಡಸಿನಕೊಪ್ಪ, ಉದಯಗಿರಿ,ರೈಲ್ವೆ ಸ್ಟೇಷನ್, ರಾಮನಗರ,ತೇಜಸ್ವಿ ನಗರ, ರಾಜೀವ್ ಗಾಂಧಿನಗರ,ಸಂಗೊಳ್ಳಿ ರಾಯಣ್ಣ ನಗರ ಮಾರ್ಗದ ಬಸ್ಸುಗಳನ್ನು ದಿನಾಂಕ 17.11.2025ರ ಸೋಮವಾರದಿಂದ ಧಾರವಾಡ ಸಿ ಬಿ ಟಿ ಇಂದ ಕಾರ್ಯಾಚರಿಸಲಾಗುವುದು ಎಂದು ವಿಭಾಗೀಯ ನಿಯಂತ್ರಣಾಧಿಕಾರಿಗಳಾದ ಎಮ್. ಸಿದ್ಧಲಿಂಗೇಶ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.