ಕಲಬುರಗಿ: ರಾಮನಗರಕ್ಕೆ ಮೂಲಭೂತ ಸೌಲಭ್ಯ ಕಲ್ಪಿಸಲು ನಗರದಲ್ಲಿ ಆಯುಕ್ತರಿಗೆ ಜೈ ಕನ್ನಡಿಗರ ಸೇನೆ ಆಗ್ರಹ
ಕಲಬುರಗಿ ನಗರದ ವಾರ್ಡ್ ನಂ. 45ರ ರಾಮನಗರಕ್ಕೆ ಸಿಸಿ ರಸ್ತೆ, ಒಳಚರಂಡಿ ಹಾಗೂ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಒದಗಿಸುವಂತೆ ಜೈ ಕನ್ನಡಿಗರ ಸೇನೆ ಸಂಸ್ಥಾಪಕ ರಾಜ್ಯಾಧ್ಯಕ್ಷ ಡಾ. ದತ್ತು ಎಚ್. ಭಾಸಗಿ ಅವರ ನೇತೃತ್ವದಲ್ಲಿ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು. ಹಲವು ಮನವಿಗಳ ನಂತರವೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು. ತಕ್ಷಣ ಕ್ರಮ ಕೈಗೊಳ್ಳದಿದ್ದರೆ ಉಗ್ರ ಹೋರಾಟ ಕೈಗೊಲ್ಳುವದಾಗಿ ಪಾಲಿಕೆ ಆಯುಕ್ತರಿಗೆ ಮನವಿ ಮೂಲಕ ಎಚ್ಚರಿಸಿದರು. ಶುಕ್ರವಾರ 2 ಗಂಟೆಗೆ ಮನವಿ ಸಲ್ಲಿಸಲಾಯಿತು...