ಶಿರಸಿ: ಶಿರಸಿಯ ಪ್ರಸಿದ್ಧ ಆಯುರ್ವೇದ ವೈದ್ಯ ಡಾ.ಅರವಿಂದ ಪಟವರ್ಧನ್ ನಿಧನ : ಗಣ್ಯರ ಸಂತಾಪ
ಶಿರಸಿ: ಪ್ರಸಿದ್ಧ ಆಯುರ್ವೇದ ವೈದ್ಯ ಡಾ.ಅರವಿಂದ ಗಣಪತರಾವ್ ಪಟವರ್ಧನ(೮೭) ಸೋಮವಾರ ನಿಧನರಾಗಿದ್ದಾರೆ. ಶಿರಸಿಯ ಮೊದಲ ಬಿಎಎಂಎಸ್ ಆಯುರ್ವೇದ ವೈದ್ಯರಾದ ಇವರು, ಶಿರಸಿಯ ರಾಯಪ್ಪ ಹುಲೇಕಲ್ ಶಾಲೆಯಲ್ಲಿ ಪ್ರಾಥಮಿಕ, ಮಾರಿಕಾಂಬಾ ಪ್ರೌಢಶಾಲೆಯಲ್ಲಿ ಪ್ರೌಢ ಶಿಕ್ಷಣ, ಮುಗಿಸಿ, ಬೆಳಗಾವಿಯಲ್ಲಿ ಪದವಿಪೂರ್ವ ಶಿಕ್ಷಣ ಮುಗಿಸಿ, ನಂತರ ಪೂಣಾದ ತಿಲಕ್ ಆಯುರ್ವೇದ ಕಾಲೇಜಿನಲ್ಲಿ ೧೯೬೪ ರಲ್ಲಿ ಬಿಎಎಂಎಸ್ ಪದವಿ ಪಡೆದು ೧೯೭೦ ರಿಂದ ಶಿರಸಿಯಲ್ಲಿ ವೈದ್ಯಕೀಯ ಸೇವೆ ಮುಂದುವರೆಸಿದ್ದಾರೆ. ಅತ್ಯಂತ ಶಿಸ್ತು ಮತ್ತು ಸರಳತೆಯನ್ನು ಮೈಗೂಡಿಸಿಕೊಂಡಿರುವ ಮೃತರು ಆಯುರ್ವೇದ ವೈದ್ಯ ಡಾ.ರವಿಕಿರಣ ಅವರ ತಂದೆಯವರಾಗಿದ್ದಾರೆ. ಇವರು ತಮ್ಮ ೮೭ ನೇ ಹುಟ್ಟು ಹಬ್ಬದ ದಿನವೇ ನಿಧನರಾಗಿದ್ದಾರೆ.