ಯಲ್ಲಾಪುರ: ಕಲ್ಮಠ,ಸೀತಾಪುರ ರಸ್ತೆ ತುಂಬಾ ಹೊಂಡ,ಕ್ಷೇಮಭಿವೃದ್ಧಿ ಸಮಿತಿಯಿಂದ ದುರಸ್ತಿ,ಸ್ಪಂದನೆಯಿಲ್ಲದ ಪ ಪಂ ಬಗ್ಗೆ ಆಕ್ರೋಶ #local issue
ಯಲ್ಲಾಪುರ: ಪಟ್ಟಣದ ಕಲ್ಮಠ ಸೀತಾಪುರ ಬಡಾವಣೆಯಲ್ಲಿನ ಮುಖ್ಯ ರಸ್ತೆಗಳ ಬದಿಯಲ್ಲಿ ಗಿಡಗಂಟಿಗಳು ಅಪಾಯಕಾರಿ ರೀತಿಯಲ್ಲಿ ಬೆಳೆದಿದ್ದು, ಜೊತೆಗೆ ರಸ್ತೆಗಳು ಹೊಂಡಮಯಗೊಂಡಿರುವುದರಿಂದ ವಾಹನ ಸವಾರರು ಎದ್ದು ಬಿದ್ದು ಸಾಗುವಂತಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಪಟ್ಟಣದ ಸೀತಾಪುರದ ಮೂಲಕ ಆನಗೋಡ-ಬೀಸ್ಗೋಡ್ ಭಾಗವನ್ನು ಪಟ್ಟಣದೊಂದಿಗೆ ಬೆಸೆಯುವ ಮುಖ್ಯ ಸಂಪರ್ಕ ಕೊಂಡಿಯಾಗಿದೆ. ಅಷ್ಟೇ ಅಲ್ಲದೇ ಸೀತಾಪುರದಲ್ಲಿಯೂ ನೂರಾರು ಮನೆಗಳಿದ್ದು ಅನೇಕರು ನಿತ್ಯ ಪಟ್ಟಣಕ್ಕೆ ತೆರಳುತ್ತಾರೆ. ಈ ರಸ್ತೆಯು ತಿರುವುಗಳಿಂದ ಕೂಡಿದ್ದು ಅಪಾಯಕಾರಿಯಾಗಿ ರಸ್ತೆಯ ಬದಿಯ ಗಿಡ ಗಂಟಿ ಗಳು ಬೆಳೆದು ರಸ್ತೆಯನ್ನು ಆವರಿಸಿದೆ. ಇನ್ನು ಒಳ ರಸ್ತೆಗಳು ಸಂಪೂಣ ಹೊಂಡಮಯವಾಗಿದೆ.