ಹುಬ್ಬಳ್ಳಿ: ಶಾರ್ಟ್ ಸರ್ಕ್ಯೂಟ್ನಿಂದಾಗಿ ಗಾದಿ ಅಂಗಡಿಯೊಂದು ಹೊತ್ತಿ ಉರಿದ ಘಟನೆ ಹುಬ್ಬಳ್ಳಿಯ ಬೆಂಗೇರಿ ಬಳಿ ನಡೆದಿದೆ. ಸುಮಾರು ವರ್ಷಗಳಿಂದ ಹತ್ತಿಯಿಂಸ ಗಾದೆಯನ್ನು ತಯಾರು ಮಾಡುತ್ತಿದ್ದರು. ಆದ್ರೆ ಶಾರ್ಟ್ ಸರ್ಕ್ಯೂಟ್ ಏಕಾಏಕಿಯಾಗಿ ಬೆಂಕಿ ಹತ್ತಿದ್ದು, ಇಡೀ ಅಂಗಡಿ ಬೆಂಕಿಯಿಂದ ಸುಟ್ಟು ಕರಕಲಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿಯಾಗಿಲ್ಲ, ಸ್ಥಳೀಯರು ಬೆಂಕಿಯನ್ನು ನಂದಿಸುವುದಕ್ಕೆ ಹರಸಾಹಸ ಮಾಡುತ್ತಿದ್ದಾರೆ. ಅಗ್ನಿಶಾಮಕ ದಳಕ್ಕೆ ಕರೆ ಮಾಡಿ ಮಾಹಿತಿ ತಿಳಿಸಿದ್ದಾರೆ.