ಆಳಂದ: ಪಟ್ಟಣದಲ್ಲಿ ಆರೋಗ್ಯ ಇಲಾಖೆ ಕಾರ್ಯಚರಣೆ: ಮಾನ್ಯತೆ ಇಲ್ಲದ ನಕಲಿ ಆಸ್ಪತ್ರೆಯ ಸೀಸ್
ಆಳಂದ ಪಟ್ಟಣದಲ್ಲಿ ಆರೋಗ್ಯ ಇಲಾಖೆಯ ತಂಡವು ಅಕ್ರಮವಾಗಿ ನಡೆಯುತ್ತಿದ್ದ ಖಾಸಗಿ ಕ್ಲಿನಿಕ್ ಮೇಲೆ ದಾಳಿ ನಡೆಸಿದೆ. ತಾಲ್ಲೂಕು ವೈದ್ಯಾಧಿಕಾರಿ ಡಾ. ಸುಶೀಲ ಕುಮಾರ ಅಂಬುರೆ ಹಾಗೂ ಸಿಬ್ಬಂದಿ ವರ್ಗದವರು ನಡೆಸಿದ ರೇಡ್ ವೇಳೆ ಡಾ. ರಾಮ ಕ್ಲಿನಿಕ್ ಎಂಬ ಹೆಸರಿನಲ್ಲಿ ಯಾವುದೇ ಮಾನ್ಯತೆ ಇಲ್ಲದೆ ನಕಲಿ ಆಸ್ಪತ್ರೆ ನಡೆಯುತ್ತಿರುವದು ಪತ್ತೆ ಮಾಡಿದ್ದಾರೆ. ರೋಗಿಗಳ ಜೀವಕ್ಕೆ ಅಪಾಯ ಉಂಟುಮಾಡುವ ರೀತಿಯಲ್ಲಿ ನಡೆಯುತ್ತಿದ್ದ ಈ ಕ್ಲಿನಿಕ್ಗೆ ತಕ್ಷಣವೇ ಬೀಗ ಹಾಕಿ ಸೀಜ್ ಮಾಡಲಾಯಿತು. ಈ ಬಗ್ಗೆ ಮುಂದಿನ ಕ್ರಮಕ್ಕಾಗಿ ವರದಿ ಸಲ್ಲಿಸಲು ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಮಂಗಳವಾರ ಬೆಳಗ್ಗೆ 11 ಗಂಟೆಯಿಂದ ಸಂಜೆ 5ರ ವರೆಗೆ ವಿವಿಧಡೆ ದಾಳಿ ನಡೆಸಲಾಯಿತು....