ಶಿಡ್ಲಘಟ್ಟ: ಶೆಟ್ಟಿಹಳ್ಳಿ ಗ್ರಾಮದ ಕೆರೆಯಲ್ಲಿ ಮಗಳಿಗೆ ಈಜು ಕಲಿಸಲು ಹೋದ ತಂದೆ, ಇಬ್ಬರೂ ನೀರುಪಾಲು
ಕೆರೆಯಲ್ಲಿ ಈಜು ಕಲಿಸಲು ಹೋಗಿ ತಂದೆ ಮಗಳ ದಾರುಣ ಸಾವನ್ನಪ್ಪಿರುವ ಘಟನೆ ಶಿಡ್ಲಘಟ್ಟ ತಾಲೂಕಿನ ಶೆಟ್ಟಿಹಳ್ಳಿ ಗ್ರಾಮದಲ್ಲಿ ನಡೆದಿದೆ. ಮಗಳು ಧನುಶ್ರೀಗೆ ಈಜು ಕಲಿಸಲು ಹೋಗಿದ್ದ ತಂದೆ ನಾಗೇಶ್ ಸಹಾ ಸಾವನ್ನಪ್ಪಿದ್ದು ಗ್ರಾಮದಲ್ಲಿ ಸ್ಮಶಾನ ಮೌನ ಮೂಡಿಬಂದಿದೆ. ಕೆರೆಯಲ್ಲಿ ಊಳು ತುಂಬಿದ್ರಿಂದ ನಡೆದಿರುವ ದುರ್ಘಟನೆ ಎಂದು ತಿಳಿದು ಬಂದಿದೆ. ಮೃತದೇಹಗಳ ಮರಣೋತ್ತರ ಪರೀಕ್ಷೆಗಾಗಿ ಶಿಡ್ಲಘಟ್ಟ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು ಆಸ್ಪತ್ರೆ ಬಳಿ ಶಾಸಕ ರವಿಕುಮಾರ್ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. ಇನ್ನೂ ಆಸ್ಪತ್ರೆ ಬಳಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇನ್ನೂ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.