ಬಳ್ಳಾರಿ: ಗಂಗಾವತಿ ಶಾಸಕ ಜನಾರ್ದನರೆಡ್ಡಿಗೆ ಜಾಮೀನು ಮಂಜೂರು ಹಿನ್ನೆಲೆ, ನಗರದಲ್ಲಿ ಬೆಂಬಲಿಗರಿಂದ ಸಂಭ್ರಮಾಚರಣೆ
ಗಂಗಾವತಿ ಶಾಸಕ ಜನಾರ್ದನರೆಡ್ಡಿಗೆ ಜಾಮೀನು ಮಂಜೂರು ಹಿನ್ನಲೆಯಲ್ಲಿ ಗಣಿನಾಡು ಬಳ್ಳಾರಿ ನಗರದ ವಾಲ್ಮೀಕಿ ವೃತ್ತದಲ್ಲಿ ಬುದುವಾರ ಸಂಜೆ ಬೆಂಬಲಿಗರಿಂದ ಸಂಭ್ರಮಾಚರಣೆ ಮಾಡಿದ್ರು. ಜನಾರ್ದನ ರೆಡ್ಡಿ ನಿವಾಸದ ಮುಂದೆ ಪಟಾಕಿ ಹಚ್ಚಿದ ಬಿಜೆಪಿ ಕಾರ್ಯಕರ್ತರು, ಬಳ್ಳಾರಿಯ ವಾಲ್ಮೀಕಿ ಸರ್ಕಲ್ ಬಳಿಯೂ ಬೆಂಬಲಿಗರಿಂದ ಸಂಭ್ರಮೋತ್ಸವ ಆಚರಿಸಿದ್ರು. ಪಟಾಕಿ ಸಿಡಿಸಿ, ಪರಸ್ಪರ ಸಿಹಿ ಹಂಚಿದ ರೆಡ್ಡಿ ಬೆಂಬಲಿಗರು, ರೆಡ್ಡಿ ನಿವಾಸ ಸೇರಿದಂತೆ ಬಳ್ಳಾರಿ ನಗರದ ವಿವಿದೆಡೆ ಸಂಭ್ರಮಾಚರಣೆ ಮಾಡಿ, ಜನಾರ್ದನ ರೆಡ್ಡಿ ಪರ ಘೋಷಣೆ ಕೂಗಿದ್ರು..