ಗೌರಿಬಿದನೂರು: ಕೆರೆ ನೀರನ್ನು ಹರಿಸಲು ಪೈಪ್ ಲೈನ್ ಹಾಕಿ ನೋಡು,ನಗರದಲ್ಲಿ ಶಾಸಕ ಕೆ.ಎಚ್ ಪುಟ್ಟಸ್ವಾಮಿಗೌಡರ ವಿರುದ್ಧ ರೈತರ ಆಕ್ರೋಶ
ಗೌರಿಬಿದನೂರು ನಗರದ ಹೊರವಲದಲ್ಲಿನ ತಾಲೂಕು ಕಚೇರಿಯ ಆವರಣದಲ್ಲಿ ಕಳೆದ 42 ದಿನಗಳಿಂದ ತಾಲೂಕಿನ ವಾಟಾದಹೊಸಹಳ್ಳಿ ಕೆರೆಯ ಅಚ್ಚುಕಟ್ಟುದಾರರ ವತಿಯಿಂದ ಅನಿರ್ದಿಷ್ಟಾವಧಿ ಧರಣಿಯನ್ನು ಮಾಡಲಾಗುತ್ತಿದೆ. ಕೆರೆಯ ನೀರನ್ನು ನಗರಕ್ಕೆ ಹರಿಸಲು ಮುಂದಾಗಿರುವ ಶಾಸಕರ ವಿರುದ್ಧ ಮಂಗಳವಾರ ಹಿರಿಯ ರೈತರು ಆಕ್ರೋಶ ಹೊರಹಾಕಿದ್ದಾರೆ. ನಿನ್ನ ಹತ್ತಿರ ಅದೆಷ್ಟು ಲಕ್ಷಗಳಿಗೆ ತೆಗೆದುಕೊಂಡು ಬಾ ,ಪೈಪ್ ಲೈನ್ ಹಾಕಿ ನೋಡು ಎಂದು ಶಾಸಕ ಕೆಎಚ್ ಪುಟ್ಟಸ್ವಾಮಿಗೌಡರ ವಿರುದ್ಧ ಹರಿಹಾಯ್ದರು.