ಹೊಸನಗರ: ಹೊಸನಗರದಲ್ಲಿ ತೆಂಗಿನಕಾಯಿ ಸಿಪ್ಪೆ ತೆರವಿಗೆ ಸ್ಥಳೀಯರ ಆಗ್ರಹ
ಹೊಸನಗರ ಪಟ್ಟಣದ ಹಳೆ ಸಾಗರ ರಸ್ತೆಯ ದುರ್ಗಾಂಬ ದೇವಸ್ಥಾನಕ್ಕೆ ಸಮೀಪವಿರುವ ಒಟ್ಟೂರ ಕೆರೆ ಏರಿ ಮೇಲೆ ಸಾವಿರಾರು ತೆಂಗಿನಕಾಯಿ ಚಿಪ್ಪು ಹರಡಿದ್ದು, ಇದು ಸಾರ್ವಜನಿಕರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಉಂಟು ಮಾಡುವ ದೂರುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. ಇದರಿಂದ ಸೊಳ್ಳೆಕಾಟ ಹೆಚ್ಚುತ್ತಿದ್ದು ಮಲೇರಿಯಾದಂತ ಮಾರಣಾಂತಿಕ ರೋಗಗಳು ಹರಡುವ ಸಂಭವ ಹೆಚ್ಚಾಗಿದ್ದು ಜನತೆ ಆತಂಕದಿಂದ ದಿನ ದೂಡುವಂತಾಗಿದ್ದು ಕೂಡಲೇ ತೆಂಗಿನ ಕಾಯಿ ಚಿಪ್ಪು ತೆರವುಗೊಳಿಸಬೇಕೆಂದು ಒತ್ತಾಯಿಸಿದ್ದಾರೆ