ನಾಗಮಂಗಲ: ಅಕ್ರಮ ಕಲ್ಲುಗಣಿಗಾರಿಕೆ ವಿರುದ್ಧ ನಾಗಮಂಗಲ ತಾಲೂಕಿನ ಹಂದೇನಹಳ್ಳಿ ಕಾಲೋನಿ ಬಳಿಯ ಅರಣ್ಯ ಜಾಗದ ಗೋಮಾಳ ಜಮೀನಿನಲ್ಲಿ ಗ್ರಾಮಸ್ಥರ ಪ್ರತಿಭಟನೆ ಜಿಲ್ಲೆಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯು ಹಂದೇನಹಳ್ಳಿ ಕಾಲೋನಿ ಬಳಿಯ ಅರಣ್ಯ ಜಾಗದ ಗೋಮಾಳ ಜಮೀನಿನಲ್ಲಿ ಕಲ್ಲು ಗಣಿಗಾರಿಕೆ ಮತ್ತು ಕ್ರಷರ್ ನಡೆಸಲು ಅನುಮತಿ ನೀಡಿದೆ. ಇದರಿಂದಾಗಿ 200 ಮೀಟರ್ ದೂರದಲ್ಲಿರುವ ಹಂದೇನಹಳ್ಳಿಯ ದಲಿತರ ಕಾಲೋನಿ ಗ್ರಾಮ ಸಂಕಷ್ಟಕ್ಕೆ ಒಳಗಾಗಿದೆ. ಈ ಅವೈಜ್ಞಾನಿಕ ನಡೆಯನ್ನು ಖಂಡಿಸಿ vಗ್ರಾಮಸ್ಥರು ಪ್ರತಿಭಟನೆ ನಡೆಸಿ, ಅಕ್ರಮವಾಗಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆಯನ್ನು ಸ್ಥಗಿತಗೊಳಿಸುವಂತೆ ಆಗ್ರಹಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.