ಯಲ್ಲಾಪುರ : ಸಮಾಜವು ಸಂಘಟನೆಯಿಂದಾಗಿ ಬಲಗೊಳ್ಳುತ್ತದೆ.ಹಾಗೇಯೇ ಶಿಕ್ಷಣ, ಸಂಸ್ಕಾರವನ್ನು ಕಲಿತಾಗ ಮಾತ್ರ ಸಮಾಜದ ಬೆಳವಣಿಗೆಯಾಗುತ್ತದೆ. ನಿರಂತರವಾಗಿ ಸಂಘಟನೆ ನಡೆಸಿಕೊಂಡು ಬಂದು ರಜತಮಹೋತ್ಸವ ಆಚರಿಸಿಕೊಳ್ಳುತ್ತಿರುವದು ಹೆಮ್ಮೆಯ ಸಂಗತಿ ಎಂದು ಶಿರಸಿ ಶಾಸಕ ಭೀಮಣ್ಣಾ ನಾಯ್ಕ ಹೇಳಿದರು.ಅವರು ರವಿವಾರ ಪಟ್ಟಣದ ಶ್ರೀ ವೆಂಕಟರಮಣ ಮಠದ ಸಭಾಭವನದಲ್ಲಿ ಸಮಗ್ರ ನಾಮದಾರಿ ಅಭಿವೃದ್ಧಿ ಸಂಘದ ರಜತಮಹೋತ್ಸವದ ನಿಮಿತ್ತ ಹಮ್ಮಿಕೊಂಡಿದ್ದ ಸಾಮೂಹಿಕ ಸತ್ಯನಾರಾಯಣ ಪೂಜೆ ಮತ್ತು ವಾರ್ಷಿಕ ಸ್ನೇಹ ಸಮ್ಮೇಳನ,ಸನ್ಮಾನ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದರು.ಶಾಸಕ ಶಿವರಾಮ್ ಹೆಬ್ಬಾರ್,ಮುಖಂಡ ಸೂರಜ್ ನಾಯ್ಕ ಸೋನಿ ಇತರರು ಇದ್ದರು.