ಪ್ರತಿವರ್ಷದಂತೆ ಈ ವರ್ಷವೂ ಕೂಡ ಆದರೆ ಸಂಕ್ರಾಂತಿ ಹಬ್ಬಕ್ಕೂ ಮುನ್ನವೇ ಶಿವಮೊಗ್ಗ ನಗರದ ಕುವೆಂಪು ಶತಮಾನೋತ್ಸವ ಶಿಕ್ಷಣ ಮಹಾವಿದ್ಯಾಲಯದ ಹಿರಿಯ ವಿದ್ಯಾರ್ಥಿಗಳ ಸಂಘದ ವತಿಯಿಂದ ಸುಗ್ಗಿ ಸಂಭ್ರಮ ಮತ್ತು ದೀಪದಾನ ಕಾರ್ಯಕ್ರಮವನ್ನು ಶುಕ್ರವಾರ ಆಯೋಜಿಸಿದ್ದರು. ಈ ಕಾರ್ಯಕ್ರಮವನ್ನ ನ್ಯಾಯಾಧೀಶ ಸಂತೋಷ್ ಅವರು ಉದ್ಘಾಟಿಸಿದರು. ರೈತಾಪಿ ವರ್ಗದ ಹಬ್ಬವನ್ನು ವಿದ್ಯಾರ್ಥಿಗಳು ಸಂಭ್ರಮ ಸಡಗರದಿಂದ ಆಚರಿಸಿದರು ಸಾಂಸ್ಕೃತಿಕ ಉಡುಗೆ ತೊಟ್ಟು. ವಿವಿಧ ಹಾಡುಗಳಿಗೆ ಹೆಜ್ಜೆ ಹಾಕುವ ಮೂಲಕ ನೆರೆದವರನ್ನು ರಂಜಿಸಿದರು