ರಸ್ತೆ ಅಪಘಾತದಲ್ಲಿ ಬಾಗಲಕೋಟೆಯ ಯೋಧ ಸಾವು.ದೆಹಲಿಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಯೋಧ ಸಾವು. ದೆಹಲಿಯ ಆರ್ಮಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ಯೋಧ. ಆಡಗಲ್ ಗ್ರಾಮದ ದುರ್ಗಪ್ಪ ಮಾದರ ಮೃತಯೋಧ. ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲ್ಲೂಕಿನ ಆಡಗಲ್ ಗ್ರಾಮ. 2010ರಲ್ಲಿ ಸೈನ್ಯಕ್ಕೆ ಸೇರಿದ್ದ ದುರ್ಗಪ್ಪ ಮಾದರ. ಬೆಂಗಳೂರಿನ ಎಂಇಜಿ ಸೆಂಟರ್ನಲ್ಲಿ ತರಬೇತಿ. 2012 ರಿಂದ ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಯೋಧ. ಬೆಂಗಳೂರು, ಅಲಹಾಬಾದ್ ಬಳಿಕ ದೆಹಲಿ ಆರ್ಮಿ ರೆಜಿಮೆಂಟ್ ನಲ್ಲಿ ಸೇವೆ.ಕರ್ತವ್ಯದ ಮೇಲಿದ್ದಾಗ ನಡೆದ ಅಪಘಾತದಲ್ಲಿ ಗಾಯಗೊಂಡು ದುರ್ಗಪ್ಪ ಆಸ್ಪತ್ರೆಗೆ ದಾಖಲಾಗಿದ್ರು. ದುರ್ಗಪ್ಪ ಡಿಸೆಂಬರ್ 10 ರಂದು ಸ್ವಗ್ರಾಮಕ್ಕೆ ಬರಲು ರಜೆ ಕೂಡಾ ಪಡೆದಿದ್ರು ಎನ್ನಲಾಗಿದೆ.