ರಬಕವಿ-ಬನಹಟ್ಟಿ: ಬನಹಟ್ಟಿ ಪೊಲೀಸ್ ಠಾಣಾ ವ್ಯಾಪ್ತಿಯ ಬ್ಯಾಂಕ್ ಗಳಿಗೆ ಭೇಟಿ ಪಿಎಸ್ಐ ಭೇಟಿ
ಬನಹಟ್ಟಿ ಪೊಲೀಸ್ ಠಾಣಾ ವ್ಯಾಪ್ತಿಯ ಬ್ಯಾಂಕ್ ಗಳಿಗೆ ಭೇಟಿ ನೀಡಿ ಭದ್ರತಾ ಮುಂಜಾಗೃತಾ ಕ್ರಮವಾಗಿ ಬ್ಯಾಂಕ್ ಆವರಣದಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಸುವಂತೆ ಹಾಗೂ ನಿರಂತರವಾಗಿ ಕಾರ್ಯನಿರ್ವಹಿಸುತ್ತಿರುವುದನ್ನು ಪರಿಶೀಲಿಸುವಂತೆ ಬನಹಟ್ಟಿ ಪೊಲೀಸ್ ಠಾಣೆಯ ಪಿಎಸ್ಐ ಶಾಂತಾ ಹಳ್ಳಿ ಸೆ.೨೨ ಮಧ್ಯಾಹ್ನ ೩ ಗಂಟೆಗೆ ಹೇಳಿದರು. ಬ್ಯಾಂಕ್ ಬಾಗಿಲು ಹಾಗೂ ಲಾಕರ್ಗಳಿಗೆ ಅಲಾರಂ ಸಿಸ್ಟಂ ಅಳವಡಿಸುವಂತೆ, ಹೆಚ್ಚಿನ ಮೊತ್ತದ ನಗದು ಸಾಗಣೆ ವೇಳೆ ಕಡ್ಡಾಯವಾಗಿ ಭದ್ರತಾ ಸಿಬ್ಬಂದಿ ಇರುವಂತೆ, ಸಂಶಯಾಸ್ಪದ ವ್ಯಕ್ತಿಗಳ ಚಟುವಟಿಕೆ ಕಂಡುಬAದರೆ ತಕ್ಷಣ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಸೂಚಿಸಲಾಯಿತು.