ಹೊನ್ನಾವರ: ಹಿರಿಯ ಪತ್ರಕರ್ತ,ಸಾಹಿತಿ ಎಲ್. ಎಸ್. ಶಾಸ್ತ್ರಿ ಅವರು ಡಾ.ಕೆರೆಮನೆ ಹೆಗಡೆ ಪ್ರತಿಷ್ಠಾನ ದ ಮಹಾಬಲ ಪ್ರಶಸ್ತಿಗೆ ಆಯ್ಕೆ
ಹೊನ್ನಾವರ :ಪ್ರಸಿದ್ಧ ಯಕ್ಷಗಾನ ಕಲಾವಿದ ಡಾ. ಕೆರೆಮನೆ ಮಹಾಬಲ ಹೆಗಡೆಯವರ 16ನೆಯ ಸಂಸ್ಮರಣಾ ದಿನ ಮತ್ತು ಕೆರೆಮನೆ ರಾಮ ಹೆಗಡೆಯವರ 6ನೆಯ ಸಂಸ್ಮರಣಾ ದಿನಗಳ ಅಂಗವಾಗಿ ಇದೇ ಅ 18 ರಂದು ಸಂಜೆ 4 ಗಂಟೆಗೆ ಹೊನ್ನಾವರ ತಾಲೂಕು ಗುಣವಂತೆಯ ಕೆರೆಮನೆ ಶಿವರಾಮ ಹೆಗಡೆ ರಂಗಮಂದಿರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಸಾಹಿತಿ, ರಂಗಚಿಂತಕ ಬೆಳಗಾವಿ ನಿವಾಸಿ ಶ್ರೀ ಲಕ್ಷ್ಮೀನಾರಾಯಣ ಶಾಸ್ತ್ರಿ , ನಾಜಗಾರ ಇವರಿಗೆ ಈ ವರ್ಷದ " ಮಹಾಬಲ ಪ್ರಶಸ್ತಿ " ನೀಡಿ ಗೌರವಿಸಲಾಗುವುದು.