ಬೆಂಗಳೂರಿನ ಶಿವಾಜಿನಗರ ವಿಧಾನಸಭಾ ಕ್ಷೇತ್ರದ ಶಾಸಕ ರಿಜ್ವಾನ್ ಹರ್ಷದ್, ಗುರುವಾರ ಹಲಸೂರು ಕೆರೆ ವೀಕ್ಷಣೆ ಮಾಡಿದರು. ಜಿಬಿಎ ಅಧಿಕಾರಿಗಳ ಜೊತೆಗೆ ಆಗಮಿಸಿದ ರಿಜ್ವಾನ್, ಹಲಸೂರು ಕೆರೆಗೆ ಮೂರು ಇನ್ಲೆಟ್ಗಳು ಬರುತ್ತಿದ್ದು, ಅವುಗಳನ್ನು ಪರಿಶೀಲಿಸಿ ಕೆ 100 ಮಾದರಿಯಲ್ಲಿ ನಾಗರಿಕ ಜಲಮಾರ್ಗ ನಿರ್ಮಾಣಕ್ಕೆ ಯೋಜನೆ ರೂಪಿಸುವಂತೆ ಸೂಚಿಸಿದರು. ಜೊತೆಗೆ ಹಲಸೂರು ಕೆರೆಯ ಅಭಿವೃದ್ಧಿ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದರು. ಈ ವೇಳೆ ಅಭಿವೃದ್ಧಿ ಅಪರ ಆಯುಕ್ತರಾದ ದಲ್ಜಿತ್ ಕುಮಾರ್, ಜಂಟಿ ಆಯುಕ್ತರಾದ ಹೇಮಂತ್ ಶರಣ್ ಇತರರಿದ್ದರು.