ಭಟ್ಕಳ: ಅರಣ್ಯ ಪ್ರದೇಶದಲ್ಲಿ ಜಾನುವಾರು ವಧೆ ಮಾಡಿ ಎಸೆದಿದ್ದ ಇಬ್ಬರು ಆರೋಪಿಗಳ ಬಂಧನ
ಭಟ್ಕಳ: ನಗರದ ಮುಗ್ದುಮ ಕಾಲೋನಿ ಗುಡ್ಡಪ್ರದೇಶದಲ್ಲಿ ಅಕ್ರಮವಾಗಿ ಜಾನುವಾರುಗಳನ್ನು ವಧೆ ಮಾಡಿ, ಚರ್ಮ-ಎಲುಬು ಸೇರಿದಂತೆ ಬಿಡಿಭಾಗಗಳನ್ನು ಅರಣ್ಯ ಪ್ರದೇಶದಲ್ಲಿ ಬಿಸಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಭಟ್ಕಳ ನಗರ ಪೊಲೀಸರು ಇಬ್ಬರು ಆರೋಪಿ ಗಳನ್ನು ಬಂಧಿಸಿದ್ದಾರೆ. ಉಪ ವಲಯ ಅರಣ್ಯಾಧಿಕಾರಿ ಮಾರುತಿ ಸೊರಗಾಂವಿ ನೀಡಿದ ದೂರಿನ ಮೇರೆಗೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಡಿವೈಎಸ್ಪಿ ಮಹೇಶ್ ಎಂ ಕೆ ಮಾರ್ಗದರ್ಶನದಲ್ಲಿ ಪಿಐ ದಿವಾಕರ ಪಿ ಎಮ್ ನೇತೃತ್ವದ ತಂಡವು ಆರೋಪಿಗಳಾದ ಮುಗ್ಗುಂ ಕಾಲೋನಿ ನಿವಾಸಿ ಮೊಹಮ್ಮದ್ ಸಮಾನ್ ಹಾಗೂ ಚೌತನಿಯ ಮೊಹಮ್ಮದ್ ರಾಹೀನ್ ಎಂಬವರನ್ನು ಬಂಧಿಸಿ ಕೃತ್ಯಕ್ಕೆ ಬಳಸಿದ ವಾಹನವನ್ನು ಸಹ ಪೊಲೀಸರು ವಶಪಡಿಸಿಕೊಂಡಿದ್ದಾರೆ.