ಹುಬ್ಬಳ್ಳಿ ನಗರ: ನಗರದಲ್ಲಿ ರೋಗಿಯೂ ಸಾಯುವ ಕೊನೆ ಕ್ಷಣ ನೀರು ಹಾಕಲು ಬಿಡದ ಆಸ್ಪತ್ರೆ ಸಿಬ್ಬಂದಿಗಳ ವಿರುದ್ಧ ಆಕ್ರೋಶ
ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ರೋಗಿ ಯೊಬ್ಬರು ಸಾಯುವ ಕೊನೆಯ ಕ್ಷಣದಲ್ಲಿ ಸಂಬಂಧಿಗಳಿಗೆ ತಿಳಿಸದೆ ಹಾಗೂ ನೀರು ಹಾಕಲು ಬಿಡದಿದ್ದಕ್ಕೆ ಆಸ್ಪತ್ರೆ ಸಿಬ್ಬಂದಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಘಟನೆ ನಡೆದಿದೆ.ಹುಬ್ಬಳ್ಳಿಯ ಗೋಕುಲ್ ರಸ್ತೆಯಲ್ಲಿರುವ ಸುಚಿರಾಯು ಆಸ್ಪತ್ರೆಯಲ್ಲಿ ರೋಗಿಯೊಬ್ಬರು ಸಾಯುವ ಮುನ್ನ. ಸಂಬಂಧಿಗಳಿಗೆ ಕೊನೆ ಕ್ಷಣದಲ್ಲಿ ನೀರನ್ನು ಸಹ ಹಾಕಲು ಬಿಟ್ಟಿಲ್ಲ ಎಂದು ಆಸ್ಪತ್ರೆ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದು. ನಿಮ್ಮ ಮನೆಯಲ್ಲಿ ಯಾರಿಗಾದರೂ ಹೀಗೆ ಆಗಿದ್ದರೆ ನೀವು ಕೂಡ ಹಾಗೆ ವರ್ತನೆ ಮಾಡುತ್ತಿದ್ದೀರಾ ಎಂದು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.