ಗುಜರಿ ವ್ಯಾಪಾರಿ ಮನೆಯಲ್ಲಿ ನಾಲ್ಕು ಲಕ್ಷ ನಗದು ಕಳವು ; ಹೆಬ್ಬಟ್ಟ ಗ್ರಾಮದಲ್ಲಿ ಘಟನೆ ಶ್ರೀನಿವಾಸಪುರ ತಾಲ್ಲೂಕಿನ ಹೆಬ್ಬಟ್ಟ ಗ್ರಾಮದ ಗುಜರಿ ವ್ಯಾಪಾರಿ ಮನೆಯಲ್ಲಿ ನಾಲ್ಕು ಲಕ್ಷ ನಗದು ಹಾಗೂ ಹತ್ತು ಗ್ರಾಂ ಚಿನ್ನ ಕಳ್ಳತನವಾಗಿದ್ದು ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಹಾಗೂ ಉಪ ಪೊಲೀಸ್ ವರಿಷ್ಟಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿ ಕಳ್ಳರ ಪತ್ತೆಗಾಗಿ ಬಲೆ ಬೀಸಿದ್ದಾರೆ. ಶ್ರೀನಿವಾಸಪುರ ತಾಲ್ಲೂಕಿನ ಹೆಬ್ಬಟ್ಟ ಗ್ರಾಮದ ಗುಜರಿ ವ್ಯಾಪಾರಿ ತಾನು ಗುಜರಿ ವಸ್ತುಗಳು ಮಾರಾಟ ಮಾಡುವ ಮೂಲಕ ಸುಮಾರು ವರ್ಷಗಳಿಂದ ಕೂಡಿಟ್ಟಿತ್ತದ್ದ ಸುಮಾರು ೪ ಲಕ್ಷ ರೂಪಾಯಿ ಹಣ ಹಾಗೂ ೧೦ ಗ್ರಾಂ ಚಿನ್ನವನ್ನು ಬುದುವಾರ ತಡ ರಾತ್ರಿ ಕಳ್ಳರು ಮನೆಗೆ ಕನ್ನಾ ಹಾಕಿ ಕದ್ದಿದ್ದಾರೆ. ಈ ಹಿನ್ನೆಲೆ ಗುರುವಾರ ಸ್ಥಳಕ್ಕೆ ಭೇಟಿ ನೀಡಿ