24/7 ಸಮರ್ಪಕ ಕುಡಿಯುವ ನೀರು ಸರಬರಾಜು ಕುರಿತು KUIDFC ವ್ಯವಸ್ಥಾಪಕ ನಿರ್ದೇಶಕರು ಪೊವಿತಾ , ಕಾರ್ಯ ನಿರ್ವಾಹಕರಾದ ನಂದೀಶಕುಮರ ಹಾಗೂ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಆಯುಕ್ತರಾದ ಡಾ.ರುದ್ರೇಶ.ಘಾಳಿ ಅವರೊಂದಿಗೆ ಸವದತ್ತಿ ಜಾಕ್ವೇಲ್, ಅಮ್ಮಿನಬಾವಿ ಶುದ್ಧ ಕುಡಿಯುವ ನೀರಿನ ಘಟಕ ಹಾಗೂ ಅಮ್ಮಿನಬಾವಿ ಮೂಲಕ ರಾಯಾಪುರದ ವರೆಗೆ ಅಳವಡಿಸುತ್ತಿರುವ ಪೈಪಲೈನ್ ಜೋಡಣೆಯ ಕಾಮಗಾರಿಯನ್ನು ಪರಿಶೀಲಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದು ಶೀಘ್ರದಲ್ಲಿ ಕಾಮಗಾರಿ ಪೂರ್ಣಗೊಳಿಸುವಂತೆ ಹುಧಾಮಪಾ ಮೇಯರ್ ಜ್ಯೋತಿ ಪಾಟೀಲ್ ಅವರು ನಿರ್ದೇಶಿಸಿದರು.