ಶಿರಸಿ: ಲಿಂಗದಕೋಣ ರಸ್ತೆಯಲ್ಲಿ ಗಾಂಜಾ ಅಮಲಿನಲ್ಲಿದ್ದ ಯುವಕನ ಬಂಧನ
ಶಿರಸಿ: ಗಾಂಜಾ ಅಮಲಿನಲ್ಲಿದ್ದ ಯುವಕನನ್ನು ಶಿರಸಿ ನಗರ ಠಾಣೆ ಪೊಲೀಸರು ಬುಧವಾರ ಬಂಧಿಸಿದ್ದಾರೆ. ಶಿರಸಿಯ ಗಣೇಶನಗರದ ನಿವಾಸಿ ಪ್ರಜ್ವಲ್ ಗಿರೀಶ್ ದೇಶಭಂಡಾರಿ ಬಂಧಿತ ಯುವಕ. ಈತ ನಗರದ ಲಿಂಗದಕೋಣ ರಸ್ತೆಯ ಮೀನು ಮಾರುಕಟ್ಟೆ ಹಿಂಭಾಗದಲ್ಲಿ ಅಮಲು ಪದಾರ್ಥ ಸೇವಿಸಿದ ಸಂಶಯದ ಮೇಲೆ ವಶಕ್ಕೆ ಪಡೆದ ಪೊಲೀಸರು, ನಗರದ ಪಂಡಿತ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಪರೀಕ್ಷಿಸಿದ ವೈದ್ಯರು ಗಾಂಜಾ ಸೇವಿಸಿರುವುದನ್ನು ದೃಢಪಡಿಸಿದ್ದಾರೆ. ಈ ಕುರಿತು ಶಿರಸಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.