ಹುನಗುಂದ: ಕೂಡಲಸಂಗಮದಲ್ಲಿ ವಾಹನ ನಿಲ್ದಾಣಕ್ಕೆ ಸ್ಥಳ ಒದಗಿಸುವಂತೆ ಕರವೇ ಪ್ರತಿಭಟನೆ
ಬಾಗಲಕೋಟ ಜಿಲ್ಲೆಯ ಹುನಗುಂದ ತಾಲೂಕಿನ ಸುಕ್ಷೇತ್ರ ಕೂಡಲಸಂಗಮದಲ್ಲಿ ಪ್ರಯಾಣಿಕರಿಗೆ ಸಂಚಾರ ಸೇವೆ ಸಲ್ಲಿಸುತ್ತಿರುವ ಆಟೋ ಚಾಲಕರು ಮತ್ತು ನಾಲ್ಕು ಚಕ್ರ ವಾಹನಗಳ ನಿಲ್ದಾಣಕ್ಕೆ ಸ್ಥಳ ಒದಗಿಸುವಂತೆ ಆಗ್ರಹಿಸಿ ಹೆಚ್. ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆ, ಬಾಗಲಕೋಟೆ ಜಿಲ್ಲಾಧ್ಯಕ್ಷ ಬಸವರಾಜ ಧರ್ಮಂತಿ ನೇತೃತ್ವದಲ್ಲಿ ಅ.06 ಮಧ್ಯಾಹ್ನ 3 ಗಂಟೆಗೆ ಪ್ರತಿಭಟಸಿ ಕೂಡಲಸಂಗಮ ಅಭಿವೃದ್ಧಿ ಮಂಡಳಿ ಆಯುಕ್ತರಿಗೆ ಮನವಿಯನ್ನು ಸಲ್ಲಿಸಿದರು.ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಗಣೇಶ ನಾಯಕ,ಸಂಜಯಗೌಡ ಗೌಡರ,ಸೋಹೈಲ್ ಸುತಾರ,ಶಾಂತಾ ಬಾವಿಕಟ್ಟಿ,ಮಂಜುಳಾ ಅಂಗಡಿ ,ನಾಗೇಶ ಗಣಾಚಾರಿ, ಶ್ರೀಶೈಲ ಹುದ್ದಾರ, ಕಾಶೀಮ ಮುಲ್ಲಾ , ಸಂತೋಷ ಪರಂಗಿ ಇದ್ದರು.