ಶಿರಸಿ: ರಾಜೀವ ನಗರ, ಅಯ್ಯಪ್ಪ ನಗರದಲ್ಲಿ ಬಂಗಾರ, ನಗದು ಕಳ್ಳತನ : ಶ್ವಾನದಳ, ಬೆರಳಚ್ಚು ತಜ್ಞರಿಂದ ಪರಿಶೀಲನೆ
ಶಿರಸಿ : ಶಿರಸಿ ನಗರದ ವಿವಿಧೆಡೆ ಸೋಮವಾರ ಸರಣಿ ಕಳ್ಳತನ ನಡೆದಿದ್ದು, ಎರಡು ಕಡೆ ಪ್ರತ್ಯೇಕವಾಗಿ ಕನ್ನ ಹಾಕಿದ ಕಳ್ಳರು ಲಕ್ಷಾಂತರ ರೂ ಬಂಗಾರ, ನಗದು ಕದ್ದೊಯ್ದಿದ್ದಾರೆ. ಶಿರಸಿಯ ರಾಜೀವ ನಗರದ ಶಮಿವುಲ್ಲಾ ಅಬ್ದುಲ್ ಸತ್ತಾರ್ ಮಿಸ್ಗಾರ್ ಮನೆಯಲ್ಲಿ ಕಳ್ಳತನವಾಗಿದ್ದು, 50 ಸಾವಿರ ರೂ ನಗರದು ಮತ್ತು 15 ಗ್ರಾಂ ಬಂಗಾರ ದೋಚಲಾಗಿದೆ. ಅದೇ ರೀತಿ ಅಯ್ಯಪ್ಪ ನಗರ ಎರಡನೇ ಕ್ರಾಸಿನ ಮಂಜುನಾಥ್ ವಾಸುದೇವ ಶೆಟ್ ಮನೆಯಲ್ಲಿ 10,000 ರೂ ನಗದು ಹಾಗೂ ನಾಲ್ಕು ಜೊತೆ ಕಿವಿಯೋಲೆ( 40g), 8kg ಬೆಳ್ಳಿ ಮತ್ತು ಒಂದು ಸೋನಾಟಾ ವಾಚ್ ಕಳ್ಳತನ ಮಾಡಲಾಗಿದೆ.