ಬಾಗಲಕೋಟೆ ಜಿಲ್ಲೆಯ ಲೋಕಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ತಿಮ್ಮಾಪುರದ “ರನ್ನ ಶುಗರ್ಸ್” ಸಕ್ಕರೆ ಕಾರ್ಖಾನೆಯಲ್ಲಿ ಕಬ್ಬು ಸಾಗಿಸುವ ವಾಹನಗಳ ಚಾಲಕರಿಗೆ ವಾಹನದ ಹಿಂದೆ ಮುಂದೆ ರೇಡಿಯಂ ರಿಫ್ಲೆಕ್ಟರ್ ಗಳನ್ನು ಅಳವಡಿಸಿಕೊಳ್ಳುವಂತೆ,ರಸ್ತೆ ಸುರಕ್ಷತಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಲೋಕಾಪುರ ಠಾಣೆಯ ಪೊಲೀಸರು ಜಾಗೃತಿ ಮೂಡಿಸಿದರು.