ಕಲಬುರಗಿ : ಸಿಎಂ ಸ್ಥಾನದಿಂದ ಸಿದ್ದರಾಮಯ್ಯರನ್ನ ಕೆಳಗಿಳಿಸಿದ್ರೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತವರು ಕ್ಷೇತ್ರ ಕಲಬುರಗಿಯಿಂದಲೇ ಕಾಂಗ್ರೆಸ್ ಮುಕ್ತಕ್ಕೆ ಚಾಲನೆ ನೀಡಲಾಗುವುದೆಂದು ಅಹಿಂದ ರಾಜ್ಯಾಧ್ಯಕ್ಷ ಪ್ರಭುಲಿಂಗ ದೊಡ್ಡಿಣಿ ಎಚ್ಚರಿಕೆ ನೀಡಿದ್ದಾರೆ.. ಡಿ27 ರಂದು ಮಧ್ಯಾನ 2 ಗಂಟೆಗೆ ಕಲಬುರಗಿಯಲ್ಲಿ ಅಹಿಂದ ಸಮಾವೇಶ ಬಳಿಕ ಮಾತನಾಡಿದ ಅವರು, ಸಿದ್ದರಾಮಯ್ಯರನ್ನ ಐದು ವರ್ಷದವರೆಗೆ ಸಿಎಂ ಸ್ಥಾನದಿಂದ ಯಾವುದೇ ಕಾರಣಕ್ಕೂ ಕೆಳಗಿಳಿಸಬಾರದು.. ಕೇಳಗಿಳಿಸಿದ್ರೆ ಸಿದ್ದರಾಮಯ್ಯನವರು ಸುಮ್ಮನೆ ಕೈಕಟ್ಟಿ ಕೂಡಲ್ಲ.. ಹೀಗಾಗಿ ಸಿದ್ದರಾಮಯ್ಯರನ್ನ ಬೆಂಬಲಿಸಿ ಜ21 ರಂದು ಹುಬ್ಬಳ್ಳಿಯಲ್ಲಿ ಅಹಿಂದ ಸಮಾವೇಶ ಆಯೋಜಿಸಲಾಗಿದೆ ಅಂತಾ ಹೇಳಿದ್ದಾರೆ