ಯಲ್ಲಾಪುರ : ದುಡ್ಡನ್ನು ಸಂಪಾದಿಸಬಹುದು ಪುಣ್ಯ ಸಂಪಾದಿಸುವದು ತುಂಬಾ ಕಷ್ಟ. ಕರ್ನಾಟಕ ಲೀಗಲ್ ಸರ್ವಿಸ್ ಪಾರ್ಟಿ ಯ ಸಂವಾದಾ ದ ಅಧ್ಯಕ್ಷ ನಾಗಿ ಯಾವದೇ ಪ್ರತಿಪಲಾಪೇಕ್ಷೆ ಇಲ್ಲದೆ. ಸಂವಾದಾ ಸ್ಕೀಮ ಮೂಲಕ ಬುಡಕಟ್ಟು,ಆದಿವಾಸಿ,ಅರಣ್ಯ ವಾಸಿಗಳಿಗೆ ಸಿಗುವ ಸೌಲಭ್ಯ ಗಳನ್ನು ತಲುಪಿಸುವ ಕಾರ್ಯ ಮಾಡಲಾಗುತ್ತದೆ. ಎಂದು ಹೈಕೋರ್ಟ ನಿವೃತ್ತ ನ್ಯಾಯಮೂರ್ತಿ ಆರ್.ಗುರುರಾಜನ ಹೇಳಿದರು.ಪಟ್ಟಣದ ವೈಟಿಎಸ್ ಎಸ್ ಶಿಕ್ಷಣ ಸಂಸ್ಥೆ ಆವಾರದಲ್ಲಿ ಜಿಲ್ಲಾಡಳಿತ ವಿವಿದ ಇಲಾಖೆಗಳ ಸಹಯೋಗದಲ್ಲಿ ಬುಡಕಟ್ಟು ಜನಾಂಗ ಮತ್ತು ಅರಣ್ಯ ವಾಸಿಗಳಿಗೆ ಜಿಲ್ಲಾ ಮಟ್ಟದ ಬೃಹತ್ ಕಾನೂನು ಸೇವೆಗಳ ಶಿಬಿರ ಉದ್ಘಾಟಿಸಿ ಮಾತನಾಡಿದರು.