ರಾಯಚೂರು ಜಿಲ್ಲಾಡಳಿತವು ಮಹಾನಗರ ಪಾಲಿಕೆ ಮತ್ತು ಇನ್ನೀತರ ಇಲಾಖೆಗಳ ಸಹಯೋಗದೊಂದಿಗೆ 30 ದಿನಗಳ ಸಮಯ ರಾಯಚೂರ ಜಿಲ್ಲೆಯಲ್ಲಿ ಪ್ರಪ್ರಥಮ ಬಾರಿಗೆ ಹಮ್ಮಿಕೊಂಡ ಸ್ಪರ್ಧಾತ್ಮಕ ಪರೀಕ್ಷೆಯ ತರಬೇತಿಯ ಸದುಪಯೋಗ ಪಡಿಸಿಕೊಳ್ಳುವಂತೆ ಜಿಲ್ಲಾಧಿಕಾರಿಗಳಾದ ನಿತೀಶ್ ಕೆ. ಅವರು ವಿದ್ಯಾರ್ಥಿಗಳಲ್ಲಿ ಮನವಿ ಮಾಡಿದ್ದಾರೆ. ಬುಧವಾರ 5 ಗಂಟೆಗೆ ಪತ್ರಿಕ ಹೇಳಿಕೆ ನೀಡಿರುವ ಅವರು ಅತ್ಯುನ್ನತ ಐಎಎಸ್, ಐಪಿಎಸ್, ಐಆರ್‌ಎಸ್, ಕೆಎಎಸ್ ಪರೀಕ್ಷೆಗಳು ಸೇರಿದಂತೆ ಎಫ್ ಡಿಎ, ಎಸ್ ಡಿಎ, ಪೊಲೀಸ್, ಎಲ್ಲ ಬಗೆಯ ಗ್ರೂಪ್ ಸಿ ಪರೀಕ್ಷೆಗೆ ಅನುಕೂಲವಾಗಲಿದೆ ಹಾಗಾಗಿ ವಿದ್ಯಾರ್ಥಿಗಳು ಸದಪಯೋಗಪಡಿಸಿಕೊಳ್ಳಬೇಕು ಎಂದರು.