ಕಾರವಾರ : ಕಾರವಾರದ ಬಾಲಮಂದಿರ ಪ್ರೌಢ ಶಾಲೆಯ ವಿದ್ಯಾರ್ಥಿನಿ ಪೂರ್ವಿ ತಾರಾನಾಥ ಹರಿಕಂತ್ರ ರಾಷ್ಟ್ರ ಮಟ್ಟದ ಕ್ರೀಡಾ ಕೂಟಕ್ಕೆ ಆಯ್ಕೆಯಾಗಿದ್ದಾಳೆ.ಶಾಲಾ ಶಿಕ್ಷಣ ಇಲಾಖೆ ಯಿಂದ ಹಾಸನ ಜಿಲ್ಲೆಯಲ್ಲಿ ನಡೆಸಿದ 2025-26ನೇ ಸಾಲಿನ ,14 ವರ್ಷ ವಯೋಮಿತಿಯ ರಾಜ್ಯ ಮಟ್ಟದ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ200 ಮತ್ತು 400 ಮೀಟರ್ ಓಟದಲ್ಲಿ ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾಳೆ.